No 1 Serial
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸೀರಿಯಲ್ ಗಳ ಜನಪ್ರಿಯತೆಯ ಓಟದಲ್ಲಿ ಸ್ಪರ್ಧೆಗೆ ಇಳಿದಂತೆ ಮೂಡಿ ಬರುತ್ತಿವೆ. ಇಲ್ಲಿ ಒಂದಕ್ಕಿಂತ ಮತ್ತೊಂದು ಎನ್ನುವಂತೆ ಸೀರಿಯಲ್ ಗಳು ಜನ ಮನ್ನಣೆ ಪಡೆಯುತ್ತಿವೆ. ಇಂತಹ ಜನಪ್ರಿಯ ಧಾರಾವಾಹಿಗಳ ಸಾಲಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಧಾರಾವಾಹಿಯಾಗಿ ಜನರ ಮನಸ್ಸನ್ನು ರಂಜಿಸಿದ್ದ, ಹಾಗೂ ಈಗಲೂ ಟಾಪ್ ಐದು ಧಾರಾವಾಹಿಗಳ ಸಾಲಲ್ಲಿ ತನ್ನ ಸ್ಥಾನವನ್ನು ಖಾಯಂ ಮಾಡಿಕೊಂಡಿರುವ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ. ಈ ಧಾರಾವಾಹಿ ತನ್ನ ಪ್ರಸಾರ ಆರಂಭಿಸಿದ ಮೊದಲ ದಿನದಿಂದಲೇ ಒಂದು ಹೊಸ ಸಂಚಲನಕ್ಕೆ ಕಾರಣವಾಯಿತು. ಟಿ ಆರ್ ಪಿ ವಿಷಯದಲ್ಲಿಯಂತೂ ಈ ಸೀರಿಯಲ್ ಹೊಸ ದಾಖಲೆಯನ್ನು ಬರೆದು ಇತಿಹಾಸ ಸೃಷ್ಟಿಸಿತು. ಜೊತೆ ಜೊತೆಯಲಿ ಕೆಲವೇ ದಿನಗಳಲ್ಲಿ ಜನರ ಅಪಾರ ಆದರವನ್ನು ತನ್ನದಾಗಿಸಿಕೊಂಡ ಧಾರಾವಾಹಿ ಕೂಡಾ ಹೌದು.
ಈ ಸೀರಿಯಲ್ ನ ಮತ್ತೊಂದು ವಿಶೇಷ ಏನೆಂದರೆ ಇದರಲ್ಲಿ ನಟಿಸಿದ ಕಲಾವಿದರನ್ನು ಜನರು ಅವರ ಪಾತ್ರಗಳ ಮೂಲಕವೇ ಗುರುತಿಸುತ್ತಿರುವುದು. ಇದು ಆ ಸೀರಿಯಲ್ ಹಾಗೂ ಅಲ್ಲಿನ ಪಾತ್ರಗಳ ಜನಪ್ರಿಯತೆ ಯಾವ ಮಟ್ಟಕ್ಕಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ವಿಶೇಷತೆ ಖಂಡಿತ ಇದೆ. ಸೀರಿಯಲ್ ನಲ್ಲಿ ನಾಯಕ ಆರ್ಯವರ್ಧನ್ ನ ಸೆಕ್ರೆಟರಿ ಮೀರಾ ಹೆಗಡೆ ಪಾತ್ರವಂತೂ ಒಂದು ವಿಶಿಷ್ಟವಾದ ಪಾತ್ರವಾಗಿದೆ. ಈ ಪಾತ್ರದ ಪ್ರಮುಖ ಆಕರ್ಷಣೆ ಎಂದರೆ ತನ್ನ ಶಿಸ್ತು ಬದ್ಧ ಕೆಲಸ, ಸೌಂದರ್ಯ ಹಾಗೂ ಪಂಕ್ಚುಯಾಲಿಟಿ.
ಮೀರಾ ಗೆ ಕೊಟ್ಟ ಕೆಲಸ ಸಮರ್ಪಕವಾಗಿ ನಡೆಯುತ್ತದೆ ಎನ್ನುವಷ್ಟು ಶಿಸ್ತಿನ ಪಾತ್ರವದು. ಸೀರಿಯಲ್ ನಲ್ಲಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ ನಟಿ ಮಾನ್ಸಿ ಮನೋಹರ್. ಮೀರಾ ಆಗಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮಾನ್ಸಿ ಅವರು ಇದೀಗ ತೆಲುಗಿನಲ್ಲಿ “ಪ್ರೇಮ ಎಂಥ ಮಧುರಂ” ಎನ್ನುವ ಹೆಸರಿನಲ್ಲಿ ಪ್ರಸಾರ ಆಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ನ ತೆಲುಗು ಆವೃತ್ತಿಯಲ್ಲಿ ನಟಿಸುತ್ತಿದ್ದಾರೆ. ಹೌದು ಈ ಸೀರಿಯಲ್ ನ ಬಹಳ ಪ್ರಮುಖವಾದ ಪಾತ್ರ, ರಾಜನಂದಿನಿ ಪಾತ್ರದ ಮೂಲಕ ತೆಲುಗು ಕಿರುತೆರೆಗೆ ಎಂಟ್ರಿ ನೀಡಿದ್ದಾರೆ ಮಾನ್ಸಿ ಮನೋಹರ್.
ಹೌದು ಈ ಶುಭ ಸುದ್ದಿಯನ್ನು ಮಾನ್ಸಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಾನ್ಸಿ ಅವರು ರಾಜನಂದಿನಿ ಗೆಟಪ್ ನಲ್ಲಿ ಇರುವ ಫೋಟೋ ಶೇರ್ ಮಾಡಿಕೊಂಡು, being Raja Nandini ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಅವರು ತಾನು ತೆಲುಗಿನಲ್ಲಿ ರಾಜನಂದಿನಿ ಪಾತ್ರ ನಿರ್ವಹಿಸುತ್ತಿರುವ ವಿಷಯ ತಿಳಿಸಿದ್ದಾರೆ. ಮಾನ್ಸಿ ಅವರ ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು ಅವರಿಗೆ ಹೊಸ ಪಾತ್ರಕ್ಕೆ ಶುಭವನ್ನು ಹಾರೈಸಿದ್ದಾರೆ. ಮಾನ್ಸಿ ಅವರ ತೆಲುಗು ಕಿರುತೆರೆಯ ಜರ್ನಿ ಅವರಿಗೆ ಯಶಸ್ಸು ತರಲೆಂದು ಅನೇಕರು ಹಾರೈಸಿದ್ದಾರೆ.
Ramesh
September 30, 2021 at 4:46 amNice Serial